Lok Sabha Election 2019 – Commoner Witnessing ‘Desh Ka Mahatyohar’

Thoughts of a commoner on Lok Sabha Election 2019, campaigned and held as ‘Desh ka Mahatyohar’ that is concluded with ‘NaMo Again’ as PM of Bharat, forming ‘Modi Sarkar 2’ with full majority.

Lok sabha election 2019 - every vote counts

Witnessing the festival of the world’s largest democracy, Bharata, is a very special feeling.

Through this general election 2019, people celebrated ‘Desh ka Mahatyohar’ or ‘the festival of democracy’ as awareness, optimism, responsibility, and inclusiveness with trust in democracy.

It is the largest election so far in the world and the total poll turnout in the country is 67.11 % (highest ever). Please note, the election was held during hot summer days and still people managed to stand in long queues to cast their vote. So, the voters deserve appreciation for creating a record of highest voter turnout.

The Election Commission of India (ECI) has commendably worked hard for fair and efficient organisation of the Lok Sabha Election 2019, in addition to campaigning for voter awareness.

As the voter awareness increases, the ECI would have to work smarter in future. It would be important to ensure the waiting in the longer queues for hours, a pleasant task, providing token system and resting arrangements. Hopefully, Digital India will witness digital voting systems in near future.

Overall, common people’s engagement in democracy is a sign of progress. May democracy win always!

ಪ್ರಜಾಪ್ರಭುತ್ವ ಭಾರತ

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾದ ಭಾರತದ ಚುನಾವಣೆಯ ಮಹಾಹಬ್ಬ, ಸುಮಾರು ಎರಡು ತಿಂಗಳ ಕಾಲ ನಡೆದು, ಯಶಸ್ವಿಯಾಗಿ ಮುಗಿದು, ಫಲಿತಾಂಶವೂ ಬಂದಿದೆ. ಪೂರ್ಣ ಬಹುಮತದ ಹೊಸ ಸರ್ಕಾರದ ರಚನೆಯೂ ಆಗಿದೆ, ಜನರ ಪ್ರೀತಿಯ ‘ನಮೋ’ ಮತ್ತೊಮ್ಮೆ ಪ್ರಧಾನಮಂತ್ರಿಯಾಗಿದ್ದಾರೆ.

ರಾಜಕಾರಣ ಒಂದು ಕೊಚ್ಚೆ ಎಂಬುದು ಜನಸಾಮಾನ್ಯರ ನಂಬಿಕೆ. ಆದರೆ, ಚುನಾಯಿತ ಸಂಸದರಿಗೆಲ್ಲ ನೀತಿಪಾಠ ಹೇಳಿ ರಾಜಕಾರಣವನ್ನು ನೈತಿಕವಾಗಿ ಮೇಲೆತ್ತುವಂತಹ ಧೀಮಂತ ಜನನಾಯಕನನ್ನು ಅತಿ ಹೆಚ್ಚಿನ ದಾಖಲೆಯ ಮತಚಲಾವಣೆ ಮಾಡಿ ಚುನಾಯಿಸಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ.

ಪ್ರಜಾಪ್ರಭುತ್ವದ ಹಬ್ಬದಲ್ಲಿ ಜನರೆಲ್ಲರೂ ಪಾಲ್ಗೊಳ್ಳಬೇಕು ಎಂಬ ಚುನಾವಣಾ ಆಯೋಗದ ಕರೆಗೆ ಸ್ಪಂದಿಸಿ ಭಾರತೀಯರು ಹೊಸ ದಾಖಲೆಯನ್ನೇ ನಿರ್ಮಿಸಿದ್ದಾರೆ. ಈ ದಾಖಲೆಯ ಮತದಾನ ಶೇಕಡಾವಾರು 67.11. ಗಮನಿಸಿ, 2016ರ USAಯ ಅಧ್ಯಕ್ಷೀಯ ಚುನಾವಣೆಯ ಮತದಾನ ಪ್ರಮಾಣ ಶೇಕಡಾ 55.7 ಆಗಿತ್ತು.

ನೀತಿಸಂಹಿತೆ ಜಾರಿಯಾದಂದಿನಿಂದ, ಮತದಾನ ಜಾಗೃತಿಯಲ್ಲಿ ಪ್ರಮುಖ ಪಾತ್ರ ವಹಿಸಿ, ನ್ಯಾಯಯುತವಾದ ಚುನಾವಣೆ ನಡೆಸಿ ಮತ ಎಣಿಕೆ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸಿ, ಚುನಾವಣೆಯ ಯಶಸ್ಸಿಗೆ ಕಾರಣವಾದ ಚುನಾವಣಾ ಆಯೋಗದ ಶ್ರದ್ಧೆ-ಶ್ರಮ ಅಭಿನಂದನಾರ್ಹ. ಈ ಬಾರಿಯ ಚುನಾವಣೆಯಲ್ಲಿ ಗರ್ಭಿಣಿಯರಿಗೆ, ಅಶಕ್ತರಿಗೆ, ವೃದ್ಧರಿಗೆ ವಿಶೇಷ ಸರತಿ ಸಾಲು ಇದ್ದಿದು ಶ್ಲಾಘನೀಯ. ಬಿರುಬಿಸಿಲಲ್ಲಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದು ಮತದಾರರ ಆಸ್ಥೆಗೆ ಹಿಡಿದ ಕನ್ನಡಿ.

ಮತಚಲಾವಣೆಯ ಬಗ್ಗೆ ಜನಜಾಗೃತಿ ಹೆಚ್ಚುತ್ತಿರುವಂತೆ ಮುಂದಿನ ದಿನಗಳಲ್ಲಿ ಚುನಾವಣಾ ಆಯೋಗ ಇನ್ನೂ ದೊಡ್ಡ ಮಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯ ಇದೆ. ಬಿರುಬೇಸಿಗೆಯಲ್ಲಿ ನಡೆಯುವ ಚುನಾವಣೆಯಲ್ಲಿ ಹೆಚ್ಚು ಜನ ಉತ್ಸಾಹದಿಂದ ಮತ ಚಲಾಯಿಸಲು ಟೋಕನ್ ವ್ಯವಸ್ಥೆ, ಕುಳಿತುಕೊಳ್ಳುವ ಸರತಿಸಾಲಿನ ವ್ಯವಸ್ಥೆ ಮತ್ತು/ಅಥವಾ online ಮತ ಚಲಾವಣೆಯ ವ್ಯವಸ್ಥೆ ಸಹಕಾರಿ ಆಗಬಹುದು. ಬಹುಶಃ ಈ ಯಾವುದೇ ರೀತಿಯ ಕ್ರಮಗಳು ಮತದಾನವನ್ನು ಇನ್ನೂ ಹೆಚ್ಚಿಸಲು ಜನರಿಗೆ ಪ್ರೇರಣೆಯಾಗಬಹುದು.

ಒಟ್ಟಿನಲ್ಲಿ, ಹೆಚ್ಚುತ್ತಿರುವ ಆಶಾವಾದ-ಆತ್ಮವಿಶ್ವಾಸ-ಪ್ರಜ್ಞಾವಂತಿಕೆ-ಸಮಷ್ಟಿಪ್ರಜ್ಞೆಯ ಮತ್ತು ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯ ಸಂಕೇತವಾಗಿದೆ ಈ ಜನಜಾಗೃತಿ. ಇದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸುತ್ತಿದೆ. ಭಾರತ ವಿಶ್ವಕ್ಕೇ ಮಾದರಿಯಾಗಿ ನಿಲ್ಲುತ್ತಿದೆ.

About Sindhu

A nature lover and dreamer who expresses herself as an artist, fashion designer and blogger. Persued B.Sc fashion design at Karavali College (Mangaluru University 2003 - 2006) with first rank. Former lecturer for fashion designing at Gloria College, Puttur for five years (2006-2011). Blogger since 2013.

One Comment

  1. Congratulations to Mr. Modi. He deserves it. But I will not commend the Election Commission of India. They did not do a great job.

Your words make my day!