It’s Yugadi – ಮತ್ತೆ ಯುಗಾದಿ…

Yugadi is here!

It is Chandramana Yugadi. And it brings along a lot of memories… Nature’s fresh colours and fragrances… Celebrations with family… And, for us, it’s Desi Abhivyakti’s blogoversary/blogiversary!

For five years, you have been showering love upon ‘The Arts & Me’ that is now ‘DeSi Abhivyakti’. From July 2017, it has been a digital art period. And, it is one of the times, maximum number of artworks I could enjoy painting in such a short period of time. Thanks to ASUS ZenPad, Adobe Photoshop Sketch app and Autodesk Sketchbook app for assisting me to fulfil the desire to draw and paint during this period. I thank you all for encouraging and inspiring me.

**********

ಹೊಸ ಚಿಗುರನು ಹೊತ್ತು ಮೊಗ್ಗ ಬಿರಿಯುತ್ತ ನಿಂತಿರುವ ತರುಲತೆಗಳು… ತಳಿರುತೋರಣದ ಸಿಂಗಾರದಿಂದ ನಳನಳಿಸುತ್ತಿರುವ ಮನೆ-ಮನೆಗಳು… ಮನೆ ತುಂಬಿದ ಬೇವು-ಬೆಲ್ಲ, ಫಲ-ಫುಷ್ಪ, ಮೃಷ್ಟಾನ್ನ ಭೋಜನದ ಘಮ… ಹೊಸ ವಸ್ತ್ರ ತೊಟ್ಟು ಸಂಭ್ರಮಿಸುವ ಮನೆಮಂದಿ…  ಯುಗಾದಿಯ ಮತ್ತೆ ಕರೆತಂದಿವೆ.

**********

ಮೊನ್ನೆ ಒಂದು ವಾರಾಂತ್ಯದ ಬೆಳಗು. ಬಾಲ್ಕನಿಯಲ್ಲಿ ನಿಂತು ಕಣ್ಣು ಹಾಯಿಸಿದೆ. ನಿನ್ನೆವರೆಗೂ ಹಚ್ಚಹಸುರಗಿದ್ದ ದಾರಿಬದಿಯ ಮರಗಳು ಚಿನ್ನದ ಬಣ್ಣಕ್ಕೆ ತಿರುಗಲಾರಂಭಿಸಿದ್ದವು. ಮೊದಲ ದಿನ ಒಂದು ಭಾಗ ಹೊನ್ನಾಯಿತು, ಎರಡನೇ ದಿನ ಮತ್ತಷ್ಟು ರಂಗೇರಿತು. ಮೂರನೇ ದಿನಕ್ಕೆ ಕೆಲವೇ ಎಲೆಗಳು ಹಸುರ ತೊರೆಯಲು ಬಾಕಿ ಇದ್ದವು. ನಮ್ಮ ಕ್ಯಾಮರಾ ಕಣ್ಣು ಚುರುಕಾಯಿತು. ನಾಲ್ಕು ದಿನ ಬಿಡದೆ ಬೆಂಬಿಡಿಯಿತು, ಮರಗಳ ನವವಸಂತನ ಸ್ವಾಗತದ ತಯಾರಿಯ ಕಣ್ತುಂಬಲು. ಒಂದೆರಡೇ ದಿನಕ್ಕೆ ಎಲೆಗಳೆಲ್ಲ ಒಂದೊಂದಾಗಿ ತಾಮ್ರವರ್ಣಕ್ಕೆ ಭಡ್ತಿ ಹೊಂದಿ, ಗಾಳಿ ಬೀಸುತ್ತಲೇ ಮರದಿಂದ ಕಳಚಿ ಗಮ್ಮತ್ತಿನಿಂದ ಕುಣಿಯುತ್ತ ನೆಲ ಸೇರಿದವು. ಗೆಲ್ಲು ಖಾಲಿಯಾದಂತೆ ತುದಿಗಳಲ್ಲಿ ಮೂಡಿದ್ದ ಕುಡಿಗಳು, ಮುತ್ತಿಕ್ಕುವ ರವಿಕಿರಣಗಳ ಜೊತೆಗೂಡಿ ಕಚಗುಳಿಯಿಡುವ ಗಾಳಿಯ ತೆಕ್ಕೆಯಲ್ಲಿರುವ ಅರಿವಾಗಿ ಲಜ್ಜೆ ಮೂಡಿ ಕೆಂಪಾದವು. ನೋಡನೋಡುತ್ತಲೇ ಬಲಿತು ಹಸಿರ ಹೊತ್ತು ಮೊಗ್ಗ ಬಿಟ್ಟು ಮರದುಂಬಿ ಕಂಗಳಿಸಿದವು.

This slideshow requires JavaScript.

ಪ್ರಕೃತಿ ಏನೋ ಪಾಠ ಹೇಳುತ್ತಿರುವಂತಿದೆಯಲ್ಲ! ಬದಲಾವಣೆಗೆ ತೆರಕೊಂಡು, ಕಾಲಕಾಲಕ್ಕೆ ನಮ್ಮೊಳಗೆ ತುಂಬುವ ಕಸವ ಹೊರಹಾಕಿ ಹಗುರಾಗಿ, ಹೊಸತನವ ಚಿಗುರಲು ಬಿಟ್ಟು… ಆಗ ಅರಳುವ ಸಂತೋಷವೆಂಬ ಹೂಗಳ ಅಸ್ತಿತ್ವಕ್ಕೆ ಸಾಕ್ಷಿಯಾಗು ಎನ್ನುವಂತಿದೆ ಈ ಪ್ರಕೃತಿ.

**********

‘The Arts & Me’ ಆಗಿ ಎಪ್ರಿಲ್ ೧೦, ೨೦೧೩ಕ್ಕೆ ಪ್ರಾರಂಭಗೊಂಡು, ಇತ್ತೀಚೆಗೆ ‘ದೇಸಿ ಅಭಿವ್ಯಕ್ತಿ’ಯಾಗಿ ಹೊಸತನದ ಕನಸು ಕಾಣುತ್ತಿರುವ ಈ ಅಂತರ್ಜಾಲ ತಾಣಕ್ಕೆ ಈ ಯುಗಾದಿಗೆ ಐದು ವಸಂತಗಳು ತುಂಬಿ ಆರನೆಯ ಹರೆಯ. ಹಂಚಿಕೊಳ್ಳುವುದು ಬೆಟ್ಟದಷ್ಟು ಇದೆ, ಆ ಬೆಟ್ಟದ ಗಾತ್ರ ದೊಡ್ಡದಾಗುತ್ತಲೇ ಇದೆ. ಜೊತೆಗೆ ಈ ಬ್ಲಾಗ್, ಬ್ಲಾಗಿಂಗ್ ಮತ್ತು ಅಕ್ಕರೆಯ ಓದುಗರಾದ ನಿಮ್ಮ ಮೇಲೆ ಪ್ರೀತಿ ಹೆಚ್ಚಾಗುತ್ತಲೇ ಇದೆ. ಹಳೆ ಎಲೆಗಳು ಉದುರುವಾಗ ಮರ ಬೆಳೆಯುವುದೇ ನಿಲ್ಲಿಸಿತೇನೋ ಅನಿಸುವುದುಂಟು. ಆದರೆ, ಅದು ಹೂಬಿಡುವ ತಯಾರಿಯಷ್ಟೇ? ಅದೇ ತಿರುವಲ್ಲಿ ‘ದೇಸಿ ಅಭಿವ್ಯಕ್ತಿ’ಯೂ ಇದೆ. ಎಂದಿನಂತೆ ಕಾದು, ಪ್ರೀತಿ ಉಣಿಸಿ ಬೆಳೆಸುವಿರಲ್ಲ?

**********

ಜೀವನದ ಬೇವು-ಬೆಲ್ಲವನ್ನೆಲ್ಲ ಸಮಚಿತ್ತದಿಂದ ಸ್ವೀಕರಿಸುತ್ತ, ಆತ್ಮೀಯರೊಡಗೂಡಿ ಪರಸ್ಪರ ಸಹಜೀವನದಿಂದ ಸಂತಸ ಹೊಂದುತ್ತ, ಉದಾತ್ತ ಗುರಿಗಳ ಸಾಧನೆ ಮಾಡುವ ಅವಕಾಶ ನಮ್ಮದಾಗಲಿ. ನಿಮಗೆಲ್ಲ ಚಾಂದ್ರಮಾನ ಯುಗಾದಿಯ ಶುಭಾಶಯಗಳು. ವಿಳಂಬಿ ಸಂವತ್ಸರ ಎಲ್ಲರಿಗೂ ಖುಷಿ ತರಲಿ.

**********

Happy Yugadi to all! May the  mother nature inspire us!

About Sindhu

A nature lover and dreamer who expresses herself as an artist, fashion designer and blogger. Persued B.Sc fashion design at Karavali College (Mangaluru University 2003 - 2006) with first rank. Former lecturer for fashion designing at Gloria College, Puttur for five years (2006-2011). Blogger since 2013.

2 Comments

  1. Happy Yugadi to you and your family.

Your words make my day!