ರಾಮ ತುಳಸಿ ಹೂ ಬಿಟ್ಟಾಗ… The Holy Basil Blooms!

A holy basil plant with emerging flower buds
ಪ್ರಿಯ ಕಲಾಪ್ರೇಮಿ, 
ಇದು The Arts & Me ಯಲ್ಲಿ 100 ನೇ ಪತ್ರ. ಸ್ವಗತದಲ್ಲೇ ಹೆಚ್ಚಾಗಿ ಬರೆಯುವ ನಾನು ನಿಮ್ಮನ್ನುದ್ದೇಶಿಸಿ ಬರೆಯುತ್ತಿರುವ (ಬಹುಶಃ) ಮೂರನೆಯ ಪತ್ರ. ಇಲ್ಲಿವರೆಗೆ ನನ್ನನ್ನು The Arts & Me ಯಲ್ಲಿ ಪ್ರತಿದಿನ ಭೇಟಿ ಮಾಡಿ, ಮನಸ್ಸು ತೋಚಿದಂತೆ ಗೀಚಿದ್ದನ್ನು, ಕ್ಲಿಕ್ಕಿಸಿದ್ದನ್ನು ತುಂಬು ಮನಸ್ಸಿನಿಂದ ಪ್ರೋತ್ಸಾಹಿಸುತ್ತಿರುವ; ನೂರನೇ ಅಂಚೆಯವರೆಗೂ ನನ್ನ ಉತ್ಸಾಹ ಬೆಳೆಸಿದ ಪ್ರಿಯ ಕಲಾಪ್ರೇಮಿ, ನಿಮಗೆ ನನ್ನ ಧನ್ಯವಾದಗಳು.
ಕೆಲವು ದಿನಗಳಿಂದ ನನಗೆ ನಾನೇ ನಿಯಮಗಳನ್ನು ಹಾಕಿಕೊಳ್ಳುವ ಯೋಚನೆ ಇತ್ತು:
  • ನಿತ್ಯಚಿತ್ರ: ಸೋಮವಾರದಿಂದ ಶನಿವಾರದವರೆಗೆ ಪ್ರತಿನಿತ್ಯ ಒಂದೊಂದು ಫೋಟೋ ಪೋಸ್ಟ್.
  • ವಾರದ ಚಿತ್ರ: ಪ್ರತಿ ಮಂಗಳವಾರ ಒಂದು Artwork: pencil drawing, painting, etc.
ಎನಂತೀರಿ? ನಿಮ್ಮ ಅಭಿಪ್ರಾಯ ಏನು?
ಹಮ್, ಈಗ ಇವತ್ತಿನ ಅಂಚೆ: ನಮ್ಮ balconyಯಲ್ಲರಳಿದ ರಾಮತುಳಸಿ ಹೂವಿನ ಬಗ್ಗೆ ಹೇಳಬೇಕು. ಇಲ್ಲಿವರೆಗೆ ಎಷ್ಟೋ ಹೂಮೊಗ್ಗುಗಳ ಕದುರುಗಳು ಚಿಗುರಿದ್ದರೂ ಅವು ಅರಳುವ ಮೊದಲೇ ದೇವರಿಗೆ ಇಟ್ಟಾಗುತ್ತಿತ್ತು. ಹೀಗಿದ್ದಾಗ, ಕೆಲವು ಕದುರುಗಳನ್ನು ಹಾಗೆಯೇ ಬಿಡುವ ಮನಸ್ಸಾಯಿತು. ನೋಡನೋಡುತ್ತಿದ್ದಂತೆ ಕದುರು ದೊಡ್ಡದಾಗಿ ನೇರಳೆ ಬಣ್ಣದ ಮೊಗ್ಗುಗಳು ಮೂಡಿದವು. 
Raam TuLasi/holy basil with lavender coloured flower buds ready to blossom

ಆ ಮೊಗ್ಗುಗಳನ್ನು ಕ್ಲಿಕ್ಕಿಸುವ ಉತ್ಸಾಹದಿಂದ ಕ್ಯಾಮೆರಾ ಹಿಡಿದು ಬಂದು ಕೂತಿದ್ದೆ. ಒಂದೆರಡು ಫೋಟೋ ಕ್ಲಿಕ್ಕಿಸಿಯೂ ಆಗಿತ್ತು. ನೋಡುತ್ತೇನೆ, ಒಂದು ಮೊಗ್ಗು ಟಪ್ಪನೆ ಬಿರಿದು ಅರಳಿಯೆ ಬಿಟ್ಟಿತು! ಹೀಗೆ ಮೊದಲ ತುಳಸಿ ಹೂ ಅರಳುವುದನ್ನು ನಾನು ನೋಡಿದರೆ ಸಾಕೆ? ಫೋಟೋ ಇಲ್ಲಿದೆ. ನೀವೂ ನೋಡಿ, ಆನಂದಿಸಿ 🙂

Raam TuLasi - Hoo Bittaga (The Holy Basil - Blooms)

ಇನ್ನೊಮ್ಮೆ ಸಿಗೋಣ 🙂 ನಮಸ್ಕಾರ…

Dear Art-lover,
Today, I am posting 100th post! Thank you so much for visiting ‘The Arts & Me’ for all these days! 
(Since a few days, I had been thinking of scheduling the posts as follows): 
  • Photo of The Day: Monday to Saturday
  • Art of The Week: A sketch, a painting, etc. every Tuesday

What do you say? Please, share your opinion.

Now something about Today’s Photo:
I was lucky to witness the first holy basil flower blooming! Are you thinking that you missed it? Not at all, I have a few photos for you… Enjoy!

About Sindhu

A nature lover and dreamer who expresses herself as an artist, fashion designer and blogger. Persued B.Sc fashion design at Karavali College (Mangaluru University 2003 - 2006) with first rank. Former lecturer for fashion designing at Gloria College, Puttur for five years (2006-2011). Blogger since 2013.

Your words make my day!