Balloon Seller – ಹೊಟ್ಟೆಪಾಡಿನ ಮುಖಗಳು

Saw this balloon seller at Sarasbaug, Pune.  ಚಿಕ್ಕಂದಿನಲ್ಲಿ ಬಲೂನ್ ವಾಲ ಎಷ್ಟು ಸುಖಿ ಎಂದುಕೊಂಡಿದ್ದೆ. ಬೇಕಾದಷ್ಟು ಬಣ್ಣಬಣ್ಣದ ಬಲೂನ್ ಇರುವ ಬಲೂನ್ ವಾಲಾನಂತೆ ನನಗೂ ಬಲೂನ್ ಬೇಕು ಎಂದು ಆಸೆ ಪಡುವ ಮಕ್ಕಳೆಷ್ಟೋ! ಆದರೆ, ಪಾಪ! ಭಿಕ್ಷೆ ಬೇಡುವುದಕ್ಕಿಂತ ಟ್ರಾಫಿಕ್ ಸಿಗ್ನಲ್ ನಲ್ಲಿ  ಬಲೂನ್ ಕೊಳ್ಳದವರ ಬೈಗಳು ಎಷ್ಟೋ ಲೇಸೆಂದು ದುಡಿಯುವ ಬಲೂನ್ ವಾಲನ ಹೊಟ್ಟೆಪಾಡು ಅವನಿಗೇ ಗೊತ್ತು. ಈ ಬಲೂನ್ ವಾಲಾ ನೋಡಲು ಸಿಕ್ಕಿದ್ದು ಪುಣೆಯ ಸಾರಸ್ ಬಾಗ್ ನಲ್ಲಿ.

Continue reading

ಜಿಜ್ಞಾಸೆ ಹಾಗೆಯೇ ಇದೆ…

ಶ್ರೀ ರಾಮ ಭಾರತೀಯ ಸಂಸ್ಕೃತಿಯಲ್ಲಿ ಬಿಂಬಿಸಿರುವ ಆದರ್ಶಗಳ ಪ್ರತೀಕ. ಎಲ್ಲಿ ರಾಮನೋ ಅಲ್ಲಿ ಹನುಮನಿದ್ದಾನೆ ಎಂಬುದು ನಮ್ಮ ನಂಬಿಕೆ.  ಈ ನಂಬಿಕೆಗೆ ಪುಷ್ಟಿಕೊಡುವಂತಿದೆ ವಾಯುಪುತ್ರನ ಬಗ್ಗೆ ರಾಮರಕ್ಷಾಸ್ತೋತ್ರದಲ್ಲಿರುವ ೩೪  ನೇ ಶ್ಲೋಕ: मनोजवं मारुततुल्यवेगं जितेन्द्रियं बुद्धिमतां वरिष्ठम् | वातात्मजं वानरयूथमुख्यं श्रीरामदूतं शरणं प्रपद्ये || ಭಾವಾರ್ಥ: ಮನೋಜವನು (ಮನಸ್ಸಿನಷ್ಟು ಜವವುಳ್ಳವನು) ಮಾರುತತುಲ್ಯವೇಗವುಳ್ಳವನು (ಗಾಳಿಗೆ ಸಮಾನವಾದ ವೇಗ ಹೊಂದಿರುವವನು) ಜಿತೇಂದ್ರಿಯನು (ಇಂದ್ರಿಯಗಳನ್ನು ಜಯಿಸಿದವನು) ಬುದ್ಧಿವಂತರಲ್ಲಿ ವರಿಷ್ಠನಾದವನು ವಾಯುಪುತ್ರನು ವಾನರರಲ್ಲಿ ಪ್ರಮುಖನು ಶ್ರೀರಾಮದೂತನು ಆದವನನ್ನು ಶರಣು ಹೋಗುತ್ತೇನೆ. ಪ್ರತಿಬಾರಿ ಈ ಶ್ಲೋಕ…

Continue reading