ರವಿಮೂಡುವ ಹೊತ್ತು… A Queue at sunrise point!

ರವಿಮೂಡುವ ಹೊತ್ತು…  ರವಿಕಿರಣಗಳಿಗಾಗಿ ಹಪಹಪಿಸುತ್ತಾ  ಆಗಸದತ್ತ ಕತ್ತುದ್ದ ಮಾಡಿ ನಿಂತಿರುವ  ಕಲ್ಪವೃಕ್ಷಗಳ ಸರತಿ ಸಾಲು!

Continue reading

ಆಹಾ! ನಮ್ಮೂರು… Coastal Karnataka

ಎಷ್ಟು ಚೆಂದ ನಮ್ಮೂರು! ನೋಡು ಒಂದು ಘಳಿಗೆ! ಆ ಪುಟ್ಟ ನದಿ, ನದಿಯ ಸುತ್ತ ಆವರಿಸಿದ ಹಸಿರು ಹೊದಿಕೆ, ತೆಂಗಿನ ಮರಗಳ ಸಾಲು, ಓಡ, ಹಕ್ಕಿ-ಪಿಕ್ಕಿಗಳು… ಇವೆಲ್ಲವುಗಳ ಪ್ರತಿಬಿಂಬ ಶುಭ್ರ ಸ್ಫಟಿಕ ಜಲಧಿಯೊಳಗೆ!! ತಿಂಗಲುಗಳ ಹಸಿರ ಹಸಿವು ತೀರಿಸುವ ಆಸೆ ನಮ್ಮ ಕಂಗಳಿಗೆ… ತನ್ನೊಳಗೆ ಸೆರೆಯಾಗಿಸುವ ಆಸೆ ಈ ಕ್ಯಾಮೆರಾ ಕಣ್ಣಿಗೆ! Captured this heavenly beauty of coastal Karnataka on 18.05.2013 at 6.55am from inside the moving Volvo…

Continue reading

ರಜಾ ಮಜಾ … A Day in The Nature!

ನಮಸ್ತೆ ! ಆರಾಮವೇ ? ಇಂದಿನ e-ಅಂಚೆಗಾಗಿ ನಿನ್ನೆಯೇ ತಯಾರಿ ಮುಗಿದಿತ್ತು. ಬೆಳಗಿನ ಕೆಲಸಗಳು ಮುಗಿಯುತ್ತಿದ್ದಂತೆ, ಅಚಾನಕ್ಕಾಗಿ ಕಿಟಕಿಯಾಚೆಗೆ ದೃಷ್ಟಿ ಹೊಯಿತು. ಅರೆ! ಖಾಲಿ ಹಾಳೆಯ ಮೇಲೆ ಬಣ್ಣ ಎರಚಿದಂತೆ ನೀಲಿ ಆಗಸದಲ್ಲಿ ಪ್ರಕೃತಿ ಓಕುಳಿಯಾಡತೊಡಗಿದಂತಿತ್ತು. ಒಳಗೋಡಿ, ಕ್ಯಾಮರಾ ಹೊರತೆಗೆದು ನನ್ನ ಕೆಲಸ ಶುರುಮಾಡಿದೆ. ಹೊತ್ತೇರುತ್ತಿದ್ದಂತೆ ಆ ಮೋಡಗಳ ಆಟಕ್ಕಿನ್ನೂ ರಂಗೇರುತ್ತಲೇ ಹೋಯಿತು. ಅಬ್ಬ! ಅತ್ಯದ್ಭುತ! ಮಕ್ಕಳಿಗೆಲ್ಲಾ ಬೇಸಿಗೆ ರಜೆ ಇರುವಂತೆ ಈ ಮೋಡಗಳು, ಗಾಳಿ, ಸೂರ್ಯ, ಈ ಪ್ರಕೃತಿ ಈ ದಿನ ರಜಾ ಮಜಾದಲ್ಲಿದ್ದಂತೆ! ನನ್ನಲ್ಲೂ ಹೊಸ ಹುರುಪು! ಇಂದಿನವರೆಗೆ ಕಂಡಿಲ್ಲದ…

Continue reading