ನಿನ್ನ ಹೆಸರೇನು ಹೇಳೇ? – Cassia Javanica

– ಕಳೆದ ವರ್ಷ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಮಾವುಮೇಳದ ಸಂಭ್ರಮ. ಆಗಷ್ಟೇ ಮಳೆಗಾಲ ಇಣುಕಿತ್ತು ಬೆಂಗಳೂರಿನತ್ತ. ಹಸಿರ ನೋಡಿ ಆನಂದಿಸೋಣವೆಂದು ಹೊರಟರೆ ನಮ್ಮನ್ನು ಸ್ವಾಗತಿಸಿದ್ದು ಈ ಗುಲಾಬಿ ಬಣ್ಣದ ಮಂದಾರ (?) ಹೂವುಗಳು. ಮರತುಂಬಿ ನಿಂತ ಹೂಗಳ ದೃಶ್ಯ ಮನತುಂಬುವಂತಿತ್ತು. ಅರೆ! ಈ ಲಲನೆಯರ ಹೆಸರೇನು? ಬಾಲ್ಯದಲ್ಲಿ ಅಜ್ಜಿಯ ದೊಡ್ಡದಾದ ಹೂ ತೋಟದಲ್ಲಿ ದಿನವಿಡೀ ಆಟವಾಡುತ್ತ ಕೆಲವು ಅಪರೂಪದ ಹೂಗಿಡಗಳ ಪರಿಚಯವಾಗಿತ್ತು. ಶ್ವೇತವರ್ಣದ ಬಟ್ಟಲು ಮಂದಾರ, ದಟ್ಟ ಗುಲಾಬಿ ಬಣ್ಣದ ಪನ್ನೀರು ಮಂದಾರಗಳನ್ನು ಅಜ್ಜಿಯ ಹೂತೊಟದಲ್ಲಿಯೇ ನೋಡಿದ್ದು. ಅಂತರ್ಜಾಲದಲ್ಲಿ ಗೂಗಲಿಸಿದಾಗ ಸಿಕ್ಕಿದ್ದು…

Continue reading