Dew Drops – ಪ್ರಕೃತಿಯ ಅನರ್ಘ್ಯರತ್ನಗಳು

ಆನಂದಮಯ ಈ ಜಗಹೃದಯ – ಈ ಕುವೆಂಪು ಕವನದ ಸಾಲನ್ನು ಶಿವಮೊಗ್ಗ ಸುಬ್ಬಣ್ಣ ಅವರ ಗಂಭೀರ ಸ್ವರದಲ್ಲಿ ಕೇಳಿದರೆ ಪ್ರಕೃತಿಯೇ ಕಣ್ಣಮುಂದೆ ಕುಣಿದಾಡುವಂತಿರುತ್ತದೆ. ಪ್ರಕೃತಿಯ ಆಸ್ವಾದಿಸುವವರಿಗೆ ಅದರಷ್ಟು ರುಚಿಸುವುದು ಬೇರೆ ಇರಲಿಕ್ಕಿಲ್ಲ, ಅಥವಾ ಜೀವನವನ್ನು ಅವರಿಗಿಂತ ಹೆಚ್ಚು ಪ್ರೀತಿಸುವವರು ಇರಲಿಕ್ಕಿಲ್ಲ.  ಹಸಿರ ಮಡಿಲಲ್ಲಿ ಬೆಳೆದ ನಮಗೆ ಮಳೆಗಾಲ ಬಂತೆಂದರೆ ಎಂಥಾ ಖುಷಿ! ಆವರೆಗೆ ಮಳೆಗಾಗಿ ಕಾದು ಬಸವಳಿದ ಸಸ್ಯಸಂಕುಲಕ್ಕೆ ಚಿಗುರುವ ಸಂಭ್ರಮ. ಮಳೆಗಾಗಿ ಕಾತರಿಸಿದವರಿಗೆಲ್ಲ ಮೊಗೆಮೊಗದು ಉಡುಗೊರೆಯ ಕೊಡುವ ಆಸೆ ಪ್ರಕೃತಿಗೆ! ಆಕೆಯ ಉಡುಗೊರೆಯೇ ಈ…

Continue reading

ರಾಮ ತುಳಸಿ ಹೂ ಬಿಟ್ಟಾಗ… The Holy Basil Blooms!

ಪ್ರಿಯ ಕಲಾಪ್ರೇಮಿ,  ಇದು The Arts & Me ಯಲ್ಲಿ 100 ನೇ ಪತ್ರ. ಸ್ವಗತದಲ್ಲೇ ಹೆಚ್ಚಾಗಿ ಬರೆಯುವ ನಾನು ನಿಮ್ಮನ್ನುದ್ದೇಶಿಸಿ ಬರೆಯುತ್ತಿರುವ (ಬಹುಶಃ) ಮೂರನೆಯ ಪತ್ರ. ಇಲ್ಲಿವರೆಗೆ ನನ್ನನ್ನು The Arts & Me ಯಲ್ಲಿ ಪ್ರತಿದಿನ ಭೇಟಿ ಮಾಡಿ, ಮನಸ್ಸು ತೋಚಿದಂತೆ ಗೀಚಿದ್ದನ್ನು, ಕ್ಲಿಕ್ಕಿಸಿದ್ದನ್ನು ತುಂಬು ಮನಸ್ಸಿನಿಂದ ಪ್ರೋತ್ಸಾಹಿಸುತ್ತಿರುವ; ನೂರನೇ ಅಂಚೆಯವರೆಗೂ ನನ್ನ ಉತ್ಸಾಹ ಬೆಳೆಸಿದ ಪ್ರಿಯ ಕಲಾಪ್ರೇಮಿ, ನಿಮಗೆ ನನ್ನ ಧನ್ಯವಾದಗಳು. ಕೆಲವು ದಿನಗಳಿಂದ ನನಗೆ ನಾನೇ ನಿಯಮಗಳನ್ನು ಹಾಕಿಕೊಳ್ಳುವ ಯೋಚನೆ…

Continue reading

ರಾಮತುಳಸಿ – The Holy Basil

ನಮ್ಮ balconyಯಲ್ಲಿ ಚಿಗುರಿದ ಮೊದಲ ಸಸಿಗಳಲ್ಲೊಂದು ಈ ರಾಮತುಳಸಿ. ಕಳೆದ ವೈಶಾಖದಲ್ಲಿ ಊರಿಂದ ತಂದ ರಾಮತುಳಸಿ ಗರಿಕೆ, ನೆಲನೆಲ್ಲಿಯ ಗಿಡಗಳು ಒಂದೊಂದು ಎಲೆ ಬಿಟ್ಟಾಗಲೂ ಅದನ್ನು ನೋಡುವ ಸಂಭ್ರಮ ನನಗೆ 🙂 ಅಮ್ಮ ಕೊಟ್ಟ ಮಂಗಳೂರು ಮಲ್ಲಿಗೆ, ದಾಸವಾಳ ಗಿಡಗಳು ಚಿಗುರಲೇ ಇಲ್ಲ 🙁 ಕಿಸ್ಕಾರ, ಕೇಪುಳಗಳು ಇನ್ನಾದರೂ ಚಿಗುರುತ್ತವೋ ಗೊತ್ತಿಲ್ಲ. ಬಾಲ್ಯದಗೆಳತಿ ಸಂಧ್ಯ ಕೊಟ್ಟ ಹಿಪ್ಪುನೇರಳೆ ಈಗ ಚಿಗುರಮೊಗ್ಗು ಬಿಡುತ್ತಿವೆ…  ಕಳೆದ ಆರು ತಿಂಗಳುಗಳಿಂದ Balcony Gardening ಮಾಡುವ ತಯಾರಿ ಬಹಳವೇ ಜೋರಾಗಿತ್ತು. ಚಟ್ಟಿ ತಂದಿಟ್ಟು,…

Continue reading

The Green Path – ಅತ್ತ ಹಸಿರು, ಇತ್ತ ಹಸಿರು, ನಡುವೆ ಒಂದು ದಾರಿ…

ಅತ್ತ ಹಸಿರು – ಇತ್ತ ಹಸಿರು ನಡುವೆ ಸ್ವಲ್ಪ ಏರಿ ತೆಂಗು-ಕಂಗು ತಾಳೆ-ಬಾಳೆ ಬಳಸಿ ಒಮ್ಮೆ ಜಾರಿ  ಇಳಿದು ಹತ್ತಿ, ಹತ್ತಿ ಇಳಿದು ಪುಟ್ಟ ಹಸಿರು ಗಿರಿ  ಅಗೋ ನೋಡಿ ಅತ್ತ ನೋಡಿ! ಬಂತು ಮನೆಯ ದಾರಿ!  Reference for painting: Taranga, Weekly Kannada Magazine;   Artist: unknown

Continue reading

ರವಿಮೂಡುವ ಹೊತ್ತು… A Queue at sunrise point!

ರವಿಮೂಡುವ ಹೊತ್ತು…  ರವಿಕಿರಣಗಳಿಗಾಗಿ ಹಪಹಪಿಸುತ್ತಾ  ಆಗಸದತ್ತ ಕತ್ತುದ್ದ ಮಾಡಿ ನಿಂತಿರುವ  ಕಲ್ಪವೃಕ್ಷಗಳ ಸರತಿ ಸಾಲು!

Continue reading

ನಿನ್ನ ಹೆಸರೇನು ಹೇಳೇ? – Cassia Javanica

– ಕಳೆದ ವರ್ಷ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಮಾವುಮೇಳದ ಸಂಭ್ರಮ. ಆಗಷ್ಟೇ ಮಳೆಗಾಲ ಇಣುಕಿತ್ತು ಬೆಂಗಳೂರಿನತ್ತ. ಹಸಿರ ನೋಡಿ ಆನಂದಿಸೋಣವೆಂದು ಹೊರಟರೆ ನಮ್ಮನ್ನು ಸ್ವಾಗತಿಸಿದ್ದು ಈ ಗುಲಾಬಿ ಬಣ್ಣದ ಮಂದಾರ (?) ಹೂವುಗಳು. ಮರತುಂಬಿ ನಿಂತ ಹೂಗಳ ದೃಶ್ಯ ಮನತುಂಬುವಂತಿತ್ತು. ಅರೆ! ಈ ಲಲನೆಯರ ಹೆಸರೇನು? ಬಾಲ್ಯದಲ್ಲಿ ಅಜ್ಜಿಯ ದೊಡ್ಡದಾದ ಹೂ ತೋಟದಲ್ಲಿ ದಿನವಿಡೀ ಆಟವಾಡುತ್ತ ಕೆಲವು ಅಪರೂಪದ ಹೂಗಿಡಗಳ ಪರಿಚಯವಾಗಿತ್ತು. ಶ್ವೇತವರ್ಣದ ಬಟ್ಟಲು ಮಂದಾರ, ದಟ್ಟ ಗುಲಾಬಿ ಬಣ್ಣದ ಪನ್ನೀರು ಮಂದಾರಗಳನ್ನು ಅಜ್ಜಿಯ ಹೂತೊಟದಲ್ಲಿಯೇ ನೋಡಿದ್ದು. ಅಂತರ್ಜಾಲದಲ್ಲಿ ಗೂಗಲಿಸಿದಾಗ ಸಿಕ್ಕಿದ್ದು…

Continue reading

ಆಹಾ! ನಮ್ಮೂರು… Coastal Karnataka

ಎಷ್ಟು ಚೆಂದ ನಮ್ಮೂರು! ನೋಡು ಒಂದು ಘಳಿಗೆ! ಆ ಪುಟ್ಟ ನದಿ, ನದಿಯ ಸುತ್ತ ಆವರಿಸಿದ ಹಸಿರು ಹೊದಿಕೆ, ತೆಂಗಿನ ಮರಗಳ ಸಾಲು, ಓಡ, ಹಕ್ಕಿ-ಪಿಕ್ಕಿಗಳು… ಇವೆಲ್ಲವುಗಳ ಪ್ರತಿಬಿಂಬ ಶುಭ್ರ ಸ್ಫಟಿಕ ಜಲಧಿಯೊಳಗೆ!! ತಿಂಗಲುಗಳ ಹಸಿರ ಹಸಿವು ತೀರಿಸುವ ಆಸೆ ನಮ್ಮ ಕಂಗಳಿಗೆ… ತನ್ನೊಳಗೆ ಸೆರೆಯಾಗಿಸುವ ಆಸೆ ಈ ಕ್ಯಾಮೆರಾ ಕಣ್ಣಿಗೆ! Captured this heavenly beauty of coastal Karnataka on 18.05.2013 at 6.55am from inside the moving Volvo…

Continue reading