ರಾಮತುಳಸಿ – The Holy Basil

Raama Tulasi
ನಮ್ಮ balconyಯಲ್ಲಿ ಚಿಗುರಿದ ಮೊದಲ ಸಸಿಗಳಲ್ಲೊಂದು ಈ ರಾಮತುಳಸಿ. ಕಳೆದ ವೈಶಾಖದಲ್ಲಿ ಊರಿಂದ ತಂದ ರಾಮತುಳಸಿ ಗರಿಕೆ, ನೆಲನೆಲ್ಲಿಯ ಗಿಡಗಳು ಒಂದೊಂದು ಎಲೆ ಬಿಟ್ಟಾಗಲೂ ಅದನ್ನು ನೋಡುವ ಸಂಭ್ರಮ ನನಗೆ 🙂 ಅಮ್ಮ ಕೊಟ್ಟ ಮಂಗಳೂರು ಮಲ್ಲಿಗೆ, ದಾಸವಾಳ ಗಿಡಗಳು ಚಿಗುರಲೇ ಇಲ್ಲ 🙁 ಕಿಸ್ಕಾರ, ಕೇಪುಳಗಳು ಇನ್ನಾದರೂ ಚಿಗುರುತ್ತವೋ ಗೊತ್ತಿಲ್ಲ. ಬಾಲ್ಯದಗೆಳತಿ ಸಂಧ್ಯ ಕೊಟ್ಟ ಹಿಪ್ಪುನೇರಳೆ ಈಗ ಚಿಗುರಮೊಗ್ಗು ಬಿಡುತ್ತಿವೆ… 
ಕಳೆದ ಆರು ತಿಂಗಳುಗಳಿಂದ Balcony Gardening ಮಾಡುವ ತಯಾರಿ ಬಹಳವೇ ಜೋರಾಗಿತ್ತು. ಚಟ್ಟಿ ತಂದಿಟ್ಟು, ಅಮ್ಮ ಹೇಳಿದಂತೆ ಅಡುಗೆಮನೆಯ ಕಸಗಳನ್ನೆಲ್ಲ ಸಂಗ್ರಹಿಸಿ ಮುಚ್ಚಿಟ್ಟಿದ್ದು ಗೊಬ್ಬರವಾಗಿತ್ತು. ಪತಿಯ ಸಹಕಾರದಿಂದ ಮಣ್ಣು ಸಂಗ್ರಹ ಮಾಡಿದ್ದಾಯಿತು. ಊರಿಂದ ತಂದ ಗಿಡಗಳೆಲ್ಲವನ್ನು ನೆಟ್ಟಾಯಿತು. ಕೆಲವು ಚಿಗುರಿದವು, ಕೆಲವು ಬಾಡಿದವು. ಇನ್ನು ಕೆಲವು (ಬಹುಶಃ ಗೊಬ್ಬರದಲ್ಲಿದ್ದ) ತರಕಾರಿ ಬೀಜಗಳು ಒಂದೊಂದಾಗಿ ಮೊಳಕೆ ಬಿಟ್ಟವು! ಒಂದೊಂದಾಗಿ ಆ ಚಿಗುರುಗಳ ಛಾಯಾಚಿತ್ರಗಳು – ಇಲ್ಲಿ – ನಾಳೆಯಿಂದ 🙂
This is a Raama TuLasi (a variety of Holy Basil) from my Balcony Garden. I have been preparing for gardening since a few months. Now witnessing and enjoying every sprout in my garden. 
A few clicks from my garden – tomorrow onwards, in The Arts & Me. Hope you will come back to have a look!

About Sindhu

A nature lover and dreamer who expresses herself as an artist, fashion designer and blogger. Persued B.Sc fashion design at Karavali College (Mangaluru University 2003 - 2006) with first rank. Former lecturer for fashion designing at Gloria College, Puttur for five years (2006-2011). Blogger since 2013.

Your words make my day!