ನಿನ್ನ ಹೆಸರೇನು ಹೇಳೇ? – Cassia Javanica

ಕಳೆದ ವರ್ಷ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಮಾವುಮೇಳದ ಸಂಭ್ರಮ. ಆಗಷ್ಟೇ ಮಳೆಗಾಲ ಇಣುಕಿತ್ತು ಬೆಂಗಳೂರಿನತ್ತ. ಹಸಿರ ನೋಡಿ ಆನಂದಿಸೋಣವೆಂದು ಹೊರಟರೆ ನಮ್ಮನ್ನು ಸ್ವಾಗತಿಸಿದ್ದು ಈ ಗುಲಾಬಿ ಬಣ್ಣದ ಮಂದಾರ (?) ಹೂವುಗಳು. ಮರತುಂಬಿ ನಿಂತ ಹೂಗಳ ದೃಶ್ಯ ಮನತುಂಬುವಂತಿತ್ತು.

ಅರೆ! ಈ ಲಲನೆಯರ ಹೆಸರೇನು? ಬಾಲ್ಯದಲ್ಲಿ ಅಜ್ಜಿಯ ದೊಡ್ಡದಾದ ಹೂ ತೋಟದಲ್ಲಿ ದಿನವಿಡೀ ಆಟವಾಡುತ್ತ ಕೆಲವು ಅಪರೂಪದ ಹೂಗಿಡಗಳ ಪರಿಚಯವಾಗಿತ್ತು. ಶ್ವೇತವರ್ಣದ ಬಟ್ಟಲು ಮಂದಾರ, ದಟ್ಟ ಗುಲಾಬಿ ಬಣ್ಣದ ಪನ್ನೀರು ಮಂದಾರಗಳನ್ನು ಅಜ್ಜಿಯ ಹೂತೊಟದಲ್ಲಿಯೇ ನೋಡಿದ್ದು. ಅಂತರ್ಜಾಲದಲ್ಲಿ ಗೂಗಲಿಸಿದಾಗ ಸಿಕ್ಕಿದ್ದು ಹೀಗೆ…

ಈಕೆಯ ಸಸ್ಯಶಾಸ್ತ್ರೀಯ ಹೆಸರು [Binomial/Scientific name] Cassia Javanica, [Caesalpiniaceae Family – same as Gulmohar]. ಈಕೆ Java Cassia Flowers – Pink Shower, Apple Blossom Cassia, Cassia agnes (de Wit) Brenan, Nodding Cassia, Pink Cassia ಎಂಬ ಇನ್ನೂ ಕೆಲವು ಹೆಸರುಗಳಿಂದ ಪರಿಚಿತಳು.

ಕನ್ನಡದಲ್ಲಿ ಈ ಮಂದಾರದ ಹೆಸರೇನೆಂದು ನನಗಿನ್ನೂ ತಿಳಿಯದು. ತಿಳಿದವರು ಖಂಡಿತವಾಗಿ ನನಗೂ ತಿಳಿಸಿ. ಏನೇ ಆದರೂ ಈ ಮಳೆಗಾಲ ಈ ಮಂದಾರ ಸುಂದರಿಯರ ಸವಿನೆನಪು ನನಗಿರಲಿ…

About Sindhu

A nature lover and dreamer who expresses herself as an artist, fashion designer and blogger. Persued B.Sc fashion design at Karavali College (Mangaluru University 2003 - 2006) with first rank. Former lecturer for fashion designing at Gloria College, Puttur for five years (2006-2011). Blogger since 2013.

Your words make my day!