Ganesha Chaturthi

Sharing ‘a Ganesha art in Om’ and medicinal properties of Durva (Bermuda grass) on the occasion of Ganesha Chaturti. Also shared my thoughts about Advaita tatwa in Lord Ganesha’s birth history.
ಎಲ್ಲರಿಗೂ ಭಾದ್ರಪದಶುಕ್ಲ ಗಣೇಶಚತುರ್ಥಿಯ ಶುಭಾಶಯಗಳು. ಈ ಪೆನ್ಸಿಲ್ ಆರ್ಟ್ ಓಂಕಾರದಲ್ಲಿ ಗಣಪ.
Happy Ganesha Chaturthi. This is a pencil art of Lord Ganesha in Om.

A colour pencil art og lord ganesha in Om symbol

ಗಣಪನ ಹುಟ್ಟು ಮತ್ತು ಆಧ್ಯಾತ್ಮ 

ಗಣಪ ಪಾರ್ವತಿದೇವಿಯ ಮೈ ಕೆಸರಿನಿಂದ ಮೂಡಿದ ರೂಪ ಎಂದು ನಮ್ಮ ಪುರಾಣಗಳು ಹೇಳುತ್ತವೆ. ಗಣಪನ ಹುಟ್ಟಿನ ಕಥೆಗಳು ಬಹಳ ಇವೆ. ಒಂದೊಂದು ಕಥೆ ಒಂದೊಂದು ರೀತಿ. ಗಣೇಶನನ್ನು ಪೂಜಿಸಿದರೆ ವಿಘ್ನಗಳು ದೂರವಾಗುತ್ತವೆ ಎನ್ನುತ್ತವೆ ಪುರಾಣಗಳು. ವೈಜ್ಞಾನಿಕವಾಗಿ ಆಲೋಚಿಸುವ ಇಂದಿನ ಪೀಳಿಗೆಗೆ ಇದೆಲ್ಲ ಕಟ್ಟುಕಥೆಗಳೋ ಎಂಬ ಸಂಶಯ.

ಕಥೆಗಳ ಮೂಲ ಹುಡುಕುತ್ತಾ ಹೋದರೆ ಅವುಗಳಲ್ಲಿ ಅದ್ವೈತ ತತ್ವ ಎದ್ದು ಕಾಣುತ್ತದಲ್ಲವೆ? ಆದಿಶಕ್ತಿ, ಇಡೀ ವಿಶ್ವವನ್ನೇ ಆವರಿಸಿ, ವ್ಯವಸ್ಥಿತವಾಗಿ ನಡೆಸುವ ಶಕ್ತಿಯನ್ನು ದೇವಿ ಎಂದು ಕರೆದರು. ಪಾರ್ವತಿ ಆದಿಶಕ್ತಿಯ ಒಂದು ರೂಪ. ಆ ಆದಿಶಕ್ತಿ ಸೃಜಿಸಿದ ಮೃತ್ ರೂಪವೇ ಗಣೇಶ. ಎಲ್ಲಾ ಜೀವಿಗಳ ಶರೀರ ರೂಪುಗಳ್ಳಲು ಪ್ರಮುಖವಾದದ್ದು ಈ ಮೃತ್ ಅಥವಾ ಪೃಥ್ವಿ ಅಥವಾ ಮಣ್ಣು. ಇದನ್ನೇ ಸಾಂಕೇತಿಕವಾಗಿ ಗಣೇಶನ ಸೃಷ್ಟಿ ಎಂದು ಹೇಳಿದ್ದಾರೆ. ಈ ಕಾರಣದಿಂದಾಗಿಯೇ, ಮೊದಲು ಸ್ಮರಿಸುವುದು ಗಣಪನನ್ನು ಎನ್ನಬಹುದೇ? 

Cynodon Dactylon or Durva or Garike grass used as Antiviral, Antifungal, Hypoglycaemic, Diuretic, Antilithic, Hypotnsive, Coagulant, Antidiabetic, Antibiotic, Nticancer, Haemostatic, Antimicrobial and used in treatment of Mental disorders   ·   Urinary tract infection   ·   Skin diseases   ·   Blood purification

ಗರಿಕೆ ಯಾಕೆ ಗಣಪನಿಗೆ ಪ್ರಿಯ?

ಗರಿಕೆ ಗಣೇಶನಿಗೆ ವಿಶೇಷ. ಅನೇಕ ಔಷಧಿಯ ಗುಣಗಳ ಆಗರವಾದ ಗರಿಕೆ Hypoglycaemic, Diuretic, Antilithic, Hypotnsive, Coagulant, Antidiabetic, Antibiotic, Nticancer, Haemostatic, Antimicrobial ಆಗಿರುವುದಲ್ಲದೆ Mental disorders, Urinary tract infection, Skin diseases, Blood purification  ಇವುಗಳ ಚಿಕಿತ್ಸೆಗೂ ಅತ್ಯುತ್ತಮ. ಮಾನಸಿಕ ಹಾಗೂ ದೈಹಿಕ ಆರೋಗ್ಯ ಅಧಿಪತಿ ಗಣಪತಿಗೆ ಗರಿಕೆ ಪ್ರಿಯವಾದದ್ದು ಸಹಜವೇ. 

Why Bermuda Grass is special for Lord Ganesha?

Cynodon Dactylon or Garike Grass that is the favourite of Lord Ganesha, is having Hypoglycaemic, Diuretic, Antilithic, Hypotnsive, Coagulant, Antidiabetic, Antibiotic, Nticancer, Haemostatic, Antimicrobial properties. It is used in the treatment of  Mental disordersUrinary tract infection,  Skin diseases and Blood purification.

ಔಷಧೀಯ ಮಾಹಿತಿ ಕೃಪೆ Ayourveda Herb Durva

ಪುಣೆಯ ಗಲ್ಲಿಯಲ್ಲಿ ಗಣೇಶನ ಮೂರ್ತಿಗಳು 

ಭಾರತಿಯರು ವಿಶ್ವದಾದ್ಯಂತ ಆಚರಿಸುವ ಗಣೇಶ ಚತುರ್ಥಿಯನ್ನು ಮುಂಬೈ ಮತ್ತು ಪುಣೆಯಲ್ಲಿ ಕನಿಷ್ಠ ೧೦ದಿನಗಳ ಕಾಲ ಆಚರಿಸುತ್ತಾರೆ. ಹಳೆಪುಣೆಯ ಗಲ್ಲಿಗಲ್ಲಿಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುತ್ತಾರೆ. ಮನೆಮನೆಗಳಲ್ಲಿ ಗಣಪನ ಮೂರ್ತಿ ಕೂರಿಸುತ್ತಾರೆ. ಹಲವು ದೊಡ್ಡ-ಸಣ್ಣ ಗಣಪನ ಮಣ್ಣಿನ ಮೂರ್ತಿಗಳು ಶನಿವಾರವಾಡಾದ ಗಲ್ಲಿಗಳಲ್ಲಿ ಕಂಡದ್ದು ಹೀಗೆ. 


Photo: Ganesha Idols kept for sales in Shanivarwada, Pune.


About Sindhu

A nature lover and dreamer who expresses herself as an artist, fashion designer and blogger. Persued B.Sc fashion design at Karavali College (Mangaluru University 2003 - 2006) with first rank. Former lecturer for fashion designing at Gloria College, Puttur for five years (2006-2011). Blogger since 2013.

4 Comments

  1. Colorful and lovely. 🙂

  2. Thank you Indrani for your kind words 🙂 TC! Keep smiling 🙂

  3. Obviously , I am unable to understand a single word unlike you who will understand almost everything in Hindi 🙁 🙁
    But yes, I got the beauty of your Om -Ganesha .Its vibrant yet has a calming effect .. May be the reflection of the personality who made it ?
    🙂

  4. I love Ganesha…
    I believe that He is the most adaptable Gods of all!

    Thanks for sharing this!

Your words make my day!