Raindrops – ಮುಕ್ತಾಫಲಗಳು!

Sparkling raindrops on rose leaves

When I see the raindrops, I always remember a short story by Ms Bharati Hegde ‘Keelarime’-published in Udayavani weekly edition. The story is about a tiny drop of water that feels inferior about its size and existence. Another drop of water convinces the tiny drop. He says that he is not just a water drop, but, he is rain! Rain that is the life of all living beings!

‘Huyyo! Huyyo! MaLeraaya!’ (Let it rain!) we start singing when the rainy season enters in India. Farmer starts dreaming of golden harvest.

Aren’t these raindrops the most valuable pearls on the earth?

‘ಥತ್! ನಾನೆಷ್ಟು ಚಿಕ್ಕವನು, ನನ್ನಿಂದ್ದ ಏನೂ ಮಾಡಲು ಸಾಧ್ಯವಿಲ್ಲ. ಸೃಷ್ಟಿ ನನಗ್ಯಾಕೆ ಈ ತಾರತಮ್ಯ ಮಾಡಿದೆ ?’
ಪಟಪಟನೆ ಬೀಳುತ್ತಿದ್ದ ಮಳೆಹನಿಗಳಲ್ಲಿ ಚಿಕ್ಕಹನಿಯೊಂದು ಹೀಗೆ ಗೊಣಗಿತಂತೆ. ಪಕ್ಕದಲ್ಲೇ ಬಿದ್ದಿದ್ದ ಇನ್ನೊಂದು ನೀರಹನಿ ಹೇಳಿತಂತೆ, ‘ಅರೆ! ತಮ್ಮಾ, ಯಾಕೆ ಚಿಂತೆ ? ನೀನು ಚಿಕ್ಕವನೇ ? ಹ್ಹ ಹ್ಹಾ! ಅಲ್ಲವೇ ಅಲ್ಲ ! ನೀನು ಹನಿಯೇ ಅಲ್ಲ ! ನೀನು ನೀರು, ನೀನು ಮಳೆ ! ನೀನು ನಾನು, ನಾನು ನೀನು! ನಾವು ಜೊತೆ ಸೇರಿ ಮಳೆ !’

ಕೆಲವು ವರ್ಷಗಳ ಹಿಂದೆ ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟವಾದ ಭಾರತಿ ಹೆಗಡೆಯವರ ‘ಕೀಳರಿಮೆ’ ಕಿರುಗತೆಯ ಆಯ್ದ ವಾಕ್ಯಗಳಿವು. ನೀರಹನಿಗಳನ್ನು ನೋಡಿದಾಗಲೆಲ್ಲಾ ನನಗೆ ಈ ಕತೆ ನೆನಪಾಗುತ್ತದೆ. ಪ್ರತಿ ನೀರಹನಿಯಲ್ಲೂ ಮಳೆ ಕಾಣುತ್ತದೆ. ಅನ್ನಬ್ರಹ್ಮ ಕಾಣುತ್ತಾನೆ. ‘ಹುಯ್ಯೋ ಹುಯ್ಯೋ ಮಳೆರಾಯ!’ ಎಂದು ಹಿಗ್ಗುವ ನಮ್ಮೆಲ್ಲರ ಅನ್ನದಾತ ರೈತ ಕಾಣುತ್ತಾನೆ. 

ಮುತ್ತಿಗೆ ಮುಕ್ತಾಫಲ ಎಂಬ ಹೆಸರು ಯಾಕೆ ಬಂತೋ ಗೊತ್ತಿಲ್ಲ. ಆದರೆ, ನೀರಹನಿಗೆ ಮಿಗಿಲಾದ ಮುಕ್ತಾಫಲ ಯಾವುದೂ ಇಲ್ಲ ಎಂದೆನಿಸುತ್ತದೆ. 

About Sindhu

A nature lover and dreamer who expresses herself as an artist, fashion designer and blogger. Persued B.Sc fashion design at Karavali College (Mangaluru University 2003 - 2006) with first rank. Former lecturer for fashion designing at Gloria College, Puttur for five years (2006-2011). Blogger since 2013.

Your words make my day!