Dew Drops – ಪ್ರಕೃತಿಯ ಅನರ್ಘ್ಯರತ್ನಗಳು

A row of dew drops on a petiole of papaya leaf.
ಆನಂದಮಯ ಈ ಜಗಹೃದಯ – ಈ ಕುವೆಂಪು ಕವನದ ಸಾಲನ್ನು ಶಿವಮೊಗ್ಗ ಸುಬ್ಬಣ್ಣ ಅವರ ಗಂಭೀರ ಸ್ವರದಲ್ಲಿ ಕೇಳಿದರೆ ಪ್ರಕೃತಿಯೇ ಕಣ್ಣಮುಂದೆ ಕುಣಿದಾಡುವಂತಿರುತ್ತದೆ. ಪ್ರಕೃತಿಯ ಆಸ್ವಾದಿಸುವವರಿಗೆ ಅದರಷ್ಟು ರುಚಿಸುವುದು ಬೇರೆ ಇರಲಿಕ್ಕಿಲ್ಲ, ಅಥವಾ ಜೀವನವನ್ನು ಅವರಿಗಿಂತ ಹೆಚ್ಚು ಪ್ರೀತಿಸುವವರು ಇರಲಿಕ್ಕಿಲ್ಲ. 
ಹಸಿರ ಮಡಿಲಲ್ಲಿ ಬೆಳೆದ ನಮಗೆ ಮಳೆಗಾಲ ಬಂತೆಂದರೆ ಎಂಥಾ ಖುಷಿ! ಆವರೆಗೆ ಮಳೆಗಾಗಿ ಕಾದು ಬಸವಳಿದ ಸಸ್ಯಸಂಕುಲಕ್ಕೆ ಚಿಗುರುವ ಸಂಭ್ರಮ. ಮಳೆಗಾಗಿ ಕಾತರಿಸಿದವರಿಗೆಲ್ಲ ಮೊಗೆಮೊಗದು ಉಡುಗೊರೆಯ ಕೊಡುವ ಆಸೆ ಪ್ರಕೃತಿಗೆ! ಆಕೆಯ ಉಡುಗೊರೆಯೇ ಈ ಅನರ್ಘ್ಯರತ್ನಗಳು, ಮಳೆಹನಿಗಳು! ನಾವು ಬೆಲೆಕಟ್ಟಲಾಗದ, ನೋಡಿಮಾತ್ರವೇ ಆನಂದಿಸಬಹುದಾದ ಅದ್ಭುತ ಸೃಷ್ಟಿ ಈ ತುಷಾರ! ಚಿಕ್ಕವಳಾಗಿದ್ದಾಗಿನ ನೆನಪು… ತುಂಟ ಮಕ್ಕಳ ಒಂದು ಗುಂಪು ಕುಂಟಾಲದ ಮರ ಹತ್ತಿದರೆ, ಹಣ್ಣಿನ ಗೊಂಚಲ ಕಾದು ಕೆಳಗೆ ನಿಂತ ಇನ್ನೊಂದು ಗುಂಪಿಗೆ ಈ ಮಳೆ ಮುತ್ತುಗಳ ಸುರಿಮಳೆಯ ಕಚಗುಳಿ!
ಇಷ್ಟೆಲ್ಲಾ ನೆನಪುಗಳ ಹೊತ್ತು ತಂದದ್ದು ಪಪ್ಪಾಯಿ ಎಲೆದಂಟಿನ ಮೇಲೆ ಕುಳಿತ ಈ ಹನಿಗಳ ಸಾಲು… ಕರಾವಳಿಯ ನೆನಪುಗಳೇ ಹೀಗೆ, ಅಲ್ಲವೇ?
Dew drops are the real gems! They are priceless! We cannot own them, we can only enjoy them through our sight and heart. A person who lives in the nature is the happiest person in the world, as Kuvempu (a Kannada writer and poet) said in one of his poems, ‘Anandamaya ee jagahrudaya’ (this world is full of happiness). One would definitely fall in love with nature by listening to this poem sung by Shivamogga Subbanna.
I still remember, how eagerly my sister and my friends were climbing the Kuntala shrub and were showering the dew drops over me. Recalled all those memories when I saw these dewdrops. Clicked this snap before I had a shower of these adorable little ones!!!

About Sindhu

A nature lover and dreamer who expresses herself as an artist, fashion designer and blogger. Persued B.Sc fashion design at Karavali College (Mangaluru University 2003 - 2006) with first rank. Former lecturer for fashion designing at Gloria College, Puttur for five years (2006-2011). Blogger since 2013.

Your words make my day!