ರಜಾ ಮಜಾ … A Day in The Nature!


ನಮಸ್ತೆ ! ಆರಾಮವೇ ?


ಇಂದಿನ e-ಅಂಚೆಗಾಗಿ ನಿನ್ನೆಯೇ ತಯಾರಿ ಮುಗಿದಿತ್ತು. ಬೆಳಗಿನ ಕೆಲಸಗಳು ಮುಗಿಯುತ್ತಿದ್ದಂತೆ, ಅಚಾನಕ್ಕಾಗಿ ಕಿಟಕಿಯಾಚೆಗೆ ದೃಷ್ಟಿ ಹೊಯಿತು. ಅರೆ! ಖಾಲಿ ಹಾಳೆಯ ಮೇಲೆ ಬಣ್ಣ ಎರಚಿದಂತೆ ನೀಲಿ ಆಗಸದಲ್ಲಿ ಪ್ರಕೃತಿ ಓಕುಳಿಯಾಡತೊಡಗಿದಂತಿತ್ತು. ಒಳಗೋಡಿ, ಕ್ಯಾಮರಾ ಹೊರತೆಗೆದು ನನ್ನ ಕೆಲಸ ಶುರುಮಾಡಿದೆ. ಹೊತ್ತೇರುತ್ತಿದ್ದಂತೆ ಆ ಮೋಡಗಳ ಆಟಕ್ಕಿನ್ನೂ ರಂಗೇರುತ್ತಲೇ ಹೋಯಿತು. ಅಬ್ಬ! ಅತ್ಯದ್ಭುತ! ಮಕ್ಕಳಿಗೆಲ್ಲಾ ಬೇಸಿಗೆ ರಜೆ ಇರುವಂತೆ ಈ ಮೋಡಗಳು, ಗಾಳಿ, ಸೂರ್ಯ, ಈ ಪ್ರಕೃತಿ ಈ ದಿನ ರಜಾ ಮಜಾದಲ್ಲಿದ್ದಂತೆ! ನನ್ನಲ್ಲೂ ಹೊಸ ಹುರುಪು! ಇಂದಿನವರೆಗೆ ಕಂಡಿಲ್ಲದ ಮೋಡಗಳ ಅದ್ಭುತ ಲಾಸ್ಯ!! ಏನೇನೋ ಎಷ್ಟೆಷ್ಟೋ ಕ್ಲಿಕ್ಕಿಸಿ ಮನಸ್ಸು ಮತ್ತು ಕ್ಯಾಮರಾ ಎರಡನ್ನೂ ತುಂಬಿಸಿಕೊಂಡೆ. 

Today I surrendered myself to feel what nature was playing. I am overwhelmed enjoying its beauty!

ನಾನು ಕಂಡದ್ದನ್ನು ನಿಮಗೂ ತೋರಿಸುವ ಅದಮ್ಯ ಆಸೆಯಿಂದಾಗಿ ಇಂದಿನ ಅಂಚೆ ಈ ಮೋಡಗಳ ಪಾಲು. ನೋಡಿ, ಆನಂದಿಸಿ!

A few of my today’s clicks…. Please note that these are unedited pictures! I have just cropped and resized…

Shot @ Hadapsar, Pune, Maharashtra

About Sindhu

A nature lover and dreamer who expresses herself as an artist, fashion designer and blogger. Persued B.Sc fashion design at Karavali College (Mangaluru University 2003 - 2006) with first rank. Former lecturer for fashion designing at Gloria College, Puttur for five years (2006-2011). Blogger since 2013.

Your words make my day!